ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಕೂಡಿಗೆ, ಶುಂಠಿಕೂಡಿಗೆ ಗ್ರಾಮದ ರಸ್ತೆ ಅರ್ಧಕ್ಕೆ ಕಟ್ ಆಗಿ ಬಿದ್ದಿದು ನಗರಕ್ಕೆ ಬರಲು ಬೇರೆ ದಾರಿಯೇ ಇಲ್ಲದಾಗಿದೆ. ಸುಮಾರು 100 ಅಡಿ ಕೊಚ್ಚಿ ಹೋಗಿರುವ ರಸ್ತೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ. ಗುಡ್ಡೆತೋಟ ಗ್ರಾಮದಲ್ಲಿ ನಾರಾಯಣ್ ಎಂಬುವರ ಮನೆಯ ಬಳಿ ಭೂಕುಸಿತ ಉಂಟಾಗಿದ್ದು, ಅವರು ಎಲ್ಲಿ ಮನೆ ಬಿದ್ದು ಹೋಗುತ್ತೋ ಎಂಬ ಆತಂಕದಿಂದ ಕೂಲಿಗೆ ಹೋಗದೆ ಮನೆ ಕಾಯುತ್ತಿದ್ದಾರೆ. ಮೂಡಿಗೆರೆ ತಾಲೂಕಿನಲ್ಲೂ ಮಳೆ ಅಬ್ಬರ ಜೋರಾಗಿದ್ದು ಕಾಫಿತೋಟಕ್ಕೆ ಸಿಂಪಡಿಸಿದ ಔಷಧಿಯನ್ನ ಗಿಡಗಳು ಹೀರಿಕೊಳ್ಳೋದಕ್ಕೂ ಮಳೆ ಬಿಡ್ತಿಲ್ಲ. ಕಾಫಿ ಗಿಡಗಳಿಗೆ ರೋಗ ತಗುಲಿರುವುದರಿಂದ ತೋಟದ ಮಾಲೀಕರು ಕಂಗಾಲಾಗಿದ್ದಾರೆ. ಜಿಲ್ಲೆಯ ಎಲ್ಲಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಾರ್ಮಾಡಿ ಫಾಲ್ಸ್, ಹೆಬ್ಬೆ ಜಲಪಾತ, ಕಲ್ಲತ್ತಿಗರಿ ಜಲಪಾತ ಸೇರಿದಂತೆ ಜಿಲ್ಲೆಯ ಎಲ್ಲಾ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ನಿಮಿಷಕೊಮ್ಮೆ ಬದಲಾಗುತ್ತಿರುವ ಇಲ್ಲಿನ ಹವಾಮಾನ ಪ್ರವಾಸಿಗರನ್ನು ಸೆಳೆಯುತ್ತಿದೆ.
#publictv #raindamage #chikkamagaluru